ಸಾಕಷ್ಟು ತೆರಿಗೆ ಸಂಗ್ರಹವಾದರೂ ಅಭಿವೃದ್ಧಿ ಆಗಿಲ್ಲ ಯಾಕೆ?
ರಾಜ್ಯ ಹಾಗು ದೇಶದಲ್ಲಿ ಸಾಕಷ್ಟು ತೆರಿಗೆ ಸಂಗ್ರಹ ವಾಗಿರುವ ಮಾಹಿತಿ ನಾವು ನೋಡಬಹುದು ಆದರೆ ಇಂದು ಎಲ್ಲರಿಗೂ ಉತ್ತಮ ಮೂಲ ಸೌಕರ್ಯ ಒದಗಿಸುವಷ್ಟು ತೆರಿಗೆ ಸಂಗ್ರಹ ಆಗುತ್ತಿದ್ದರೂ 75 ವರ್ಷದ ರಾಜಕೀಯ ಆಡಳಿತದಲ್ಲಿ ಯಾವುದಾದರೂ ಒಂದು ವ್ಯವಸ್ಥೆಯನ್ನು ಸರಿಯಾಗಿ ಕೊಡಲು ಯಾಕೆ ಸಾಧ್ಯವಾಗಿಲ್ಲ? ಯಾಕೆಂದರೆ ಉದ್ದಾರ ವಾದರೆ ಯಾರು ಗುಲಾಮ ನಾಗುವುದಿಲ್ಲ ಜನರನ್ನು ಗುಲಾಮ ನಾಗಿ ಇಡಲು ಯಾವದೇ ಸರಕಾರ ಬಂದರು ಸರಿಯಾಗಿ ಅಭಿವೃದ್ಧಿ ಮಾಡುವುದಿಲ್ಲ
ಸುಮಾರು 75 ವರ್ಷದಲ್ಲಿ, ಒಂದು ಪಕ್ಷ 40 ವರ್ಷ, ಇನ್ನೊಂದು ಪಕ್ಷ 35 ವರ್ಷ ಆಡಳಿತ ಮಾಡಿದೆ. ಆದರೆ ಯಾವುದೇ ಒಂದು ಕ್ಷೇತ್ರ ಸಹ ವ್ಯವಸ್ಥಿತ ಅಭಿವೃದ್ಧಿ ಕಾಣುವಲ್ಲಿ ವಿಫಲವಾಗಿದೆ. ಆ ಪಕ್ಷ ಈ ಪಕ್ಷವನ್ನು, ಈ ಪಕ್ಷ ಆ ಪಕ್ಷವನ್ನು ಟೀಕೆ ಮಾಡುತ್ತಾ ಆರೋಪ ಮಾಡಿ ಮೋಸ ಮಾಡುತ್ತಿದೆ. ಹಿಂದೆ ಆ ಪಕ್ಷ ಕ್ಕೂ ವೋಟು ಹಾಕಿದವರು ನಮ್ಮ ಹಿರಿಯರೇ,ನಾವೇ. ಇಂದು ಈ ಪಕ್ಷಕ್ಕೂ ವೋಟು ಹಾಕಿದವರು ನಾವೇ. ಶಿಕ್ಷಣ, ಆರೋಗ್ಯ,ಸಾರಿಗೆ, ಕೃಷಿ, ವ್ಯಾಪಾರ, ಉದ್ಯೋಗ ಎಲ್ಲವೂ ಮೋಸದ ಮುಖಾಂತರ ಲಾಭ,ಸೇವೆ ಒದಗಿಸುವಂತೆ ಆಗಿದೆ.
ಅದು ಖಾಸಗಿ ಕ್ಷೇತ್ರ ಮಾತ್ರ ಹೆಚ್ಚು ಗುಣ ಮಟ್ಟ ಮತ್ತು ಲಾಭ ಪಡೆಯುವಂತೆ ಆಗಿದೆ. ಖಾಸಗಿ ಕ್ಷೇತ್ರ ದುಡ್ಡು ಇದ್ದವರಿಗೆ ಮಾತ್ರ ಉತ್ತಮ ಸೇವೆ ಕೊಡುತ್ತದೆ ಹೊರತು ದುಡ್ಡು ಇಲ್ಲದವರು ಅದರ ಚಂದ ನೋಡಿ ದರ್ಶನ ಮಾಡಿ ಬರಬೇಕಾಷ್ಟೇ. ದರ್ಶನ ಮಾಡುವುದಕ್ಕೂ ಟಿಕೆಟ್ ಚಾರ್ಜ್ ಮಾಡುತ್ತಾರೆ. ಹಾಗಾದರೆ ಸರಕಾರಿ ಸಂಸ್ಥೆ ಲಾಭ ಇಲ್ಲ, ಸರಿ ಇಲ್ಲ ಎಂದು ಮುಚ್ಚಿಕೊಂಡು ಬರುವುದು ನಿಜವಾದ ಬಡವರ ಉದ್ದಾರವೆ?
ಎಲ್ಲವನ್ನು ಖಾಸಗಿಯವರಿಗೆ ಕೊಟ್ಟು, ಸರಕಾರಿ ಸಂಸ್ಥೆ ಮುಚ್ಚುವುದಿದ್ದರೆ ತೆರಿಗೆ ಕಟ್ಟುವುದು ಯಾಕಾಗಿ? ರಾಜಕಾರಣಿಗಳ ವೈಭವ ಜೀವನಕ್ಕಾಗಿಯೇ? ಅವರ ಜಗಳ, ಸಾಮರ್ಥ್ಯ ಮೊಬೈಲ್ ನಲ್ಲಿ ನೋಡಿಕೊಂಡು ಬಡವ ಖುಷಿ ಪಡುವುದಕ್ಕಾಗಿಯೇ?ಎಲ್ಲಾವು ಖಾಸಗಿ ಸಂಸ್ಥೆ ಮಾಡುವುದಿದ್ದರೆ ಸರಕಾರ ಎನ್ನುವ ಆಡಳಿತ ವ್ಯವಸ್ಥೆ ತೆರಿಗೆ ಸಂಗ್ರಹ ಮಾಡುವುದಕ್ಕಾಗಿ ಮಾತ್ರವೇ? ಅಥವಾ ಖಾಸಗಿ ಸಂಸ್ಥೆ ಮಾಡುವ ಕೆಲಸಕ್ಕೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಲು ಮಾತ್ರ ಇರುವುದೇ?ಪ್ರತಿ ಮನೆಗೆ ಉತ್ತಮ ಜೀವನ ವ್ಯವಸ್ಥೆ ಕೊಡುವಷ್ಟು ತೆರಿಗೆ ಸಂಗ್ರಹ ಆಗುತ್ತಿದ್ದರೂ ಯಾಕೆ ಇನ್ನೂ ಸಹ ಸರಿಯಾದ ಜೀವನ ಅವಶ್ಯಕತೆ ಕೊಡಲು ಸಾಧ್ಯವಾಗಿಲ್ಲ.ಒಳ್ಳೆಯ ವ್ಯವಸ್ಥೆ ಎನ್ನುವುದು ಎಲ್ಲರೂ ಬೇಕು. ಆದರೆ ಅದನ್ನು ಪಡೆಯಬೇಕಾದ ಕಡೆಯಿಂದ ಅದನ್ನು ಪಡೆಯದೆ ಬೇರೆ ವಿಚಾರ ತಲೆಯಲ್ಲಿ ತುಂಬಿಸಿ ವಂಚನೆ ಮಾಡುವ ರಾಜಕೀಯ ತಿಳಿದಾಗ ಸಾಧ್ಯ. ಈ ರಾಜಕೀಯ ಆಡಳಿತ ತೆಗೆದು ನಿಜವಾದ
ಪ್ರಜಾಪ್ರಭುತ್ವ ಆಡಳಿತ ಜಾರಿಗೆ ಬರುವಂತೆ ಮಾಡಲು ಪ್ರಜೆಗಳ ಕೈಗೆ ನೇರವಾಗಿ ಅಧಿಕಾರ ಬಂದಾಗ ಮಾತ್ರ ಸಾಧ್ಯ.
Share on WhatsApp