ರಾಜಕೀಯದಲ್ಲಿ ಜಯಗಳಿಸಿ
ಭಾರತದಲ್ಲಿ ಜನರನ್ನು ಮರುಳು ಮಾಡುವುದು ರಾಜಕೀಯದಲ್ಲಿ ಜಯ ಗಳಿಸಲು ಸುಲಭ ವಾಗಬಹುದ.
ಜನರ ಮನಸ್ಸನ್ನು ಮೊದಲು ಆಕರ್ಷಣೆ ಮಾಡುವುದು. ಅದಕ್ಕೆ ಬೇಕಾದಂತೆ ಘಟನೆ ಸೃಷ್ಟಿ ಮಾಡಬೇಕು. ಆದನ್ನು ಸತ್ಯ ಎಂದು ಜನರು ನಂಬಬೇಕು. ಕೊನೆಗೆ ವೋಟಾಗಿ ಪರಿವರ್ತನೆ ಆಗಬೇಕು. ಇಷ್ಟು ಪ್ರಕ್ರಿಯೆ ಒಂದು ರಾಜಕೀಯ ಪಕ್ಷ ಗೆಲ್ಲಲು ಗುಟ್ಟಾಗಿ ವ್ಯವಸ್ಥೆ ಆಗುತ್ತದೆ.
ಇದನ್ನು ಮೀರಿದ ಒಂದು ನೇರ ವ್ಯವಸ್ಥೆ ಬರಬೇಕಾದರೆ ಏನು ಆಗಬೇಕು. ಅದು ಕೇವಲ ಪ್ರಜ್ಜಾವಂತ ಪ್ರಜೆಗಳಿಂದ ಮಾತ್ರ ಸಾಧ್ಯ. ಪ್ರಜೆಗಳು ಯಾವುದೇ ರಾಜಕೀಯ ಮೋಸದ ನಾಟಕಕ್ಕೆ ಬಲಿಯಾಗದಂತೆ ಇದ್ದಾಗ ಮಾತ್ರ ಸಾಧ್ಯ. ದೇಶದ 90% ಪ್ರಜೆಗಳು 10% ರಾಜಕೀಯ ವರ್ಗದ ಮೋಸಕ್ಕೆ ಬಲಿಯಾಗಿದ್ದಾರೆ.
ಹಾಗಾಗಿ 90% ಜನರಿಗೆ ಸೇರಬೇಕಾದ ಸಂಪತ್ತು, ಅಧಿಕಾರ, ಗೌರವ, ಭೂಮಿ 10% ಜನರ ಹಿಡಿತದಲ್ಲಿ ಇರುವಂತೆ ಆಗಿದೆ. ಯಾವಾಗ ಪ್ರಜೆಗಳು ಪಕ್ಷ, ನಾಯಕ, ಜಾತಿ, ಧರ್ಮ, ಸೇವೆ, ದೇಶ ಭಕ್ತಿ, ಧರ್ಮ ರಕ್ಷಕ, ಸಮರ್ಥ, ಸತ್ಯವಂತ, ಪ್ರಾಮಾಣಿಕ ಎನ್ನುವ ಮೋಸದ ರಾಜಕೀಯ ನಾಟಕ ಅಥವಾ ಸತ್ಯವೇ ಆಗಿದ್ದರೂ ಒಪ್ಲಿಕೊಳ್ಳದ ಮನಸ್ಸು ಬೆಳೆಯಬೇಕಿದೆ. ಇಂತಹ ಮನಸ್ಸು ಮಾತ್ರ ನಿಜವಾದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಜಾರಿಗೆ ಬರುವಂತೆ ಮಾಡಬಲ್ಲದು. ಇಂತಹ ಮನಸ್ಸು ಅಧಿಕಾರ ತನ್ನ ಕೈಗೆ ಬರಬೇಕೆಂದು ಬಯಸುತ್ತದೆ. ಇದು ಮಾತ್ರ ತನ್ನ ಸ್ವಾಭಿಮಾನದ ನಿಜವಾದ ರೂಪವನ್ನು ಅರ್ಥ ಮಾಡಿಕೊಳ್ಳಬಲ್ಲದು. ಇಲ್ಲದಿದ್ದರೆ ಇನ್ನೊಬ್ಬರ ತಾತ್ಕಾಲಿಕ ಹೊಗಳಿಕೆ, ಉಚಿತ, ಸೇವೆಗೆ ಆಸೆ ಪಡದೇ ಇರಲು ಸಾಧ್ಯ.
Share on WhatsApp