ಬಡವರನ್ನು ಗುಲಾಮರಾಗಿಸಿ ರಾಜಕೀಯ
ಬಡವರನ್ನು ಬಡವನಾಗಿ ಉಳಿಸಲು ನಡೆಯುವ ಬೇರೆ ಬೇರೆ ರಾಜಕೀಯ ಆಟಗಳು ಯಾವುದು?
ಇದನ್ನು ಮೇಲ್ನೋಟಕ್ಕೆ ಅಭಿವೃದ್ಧಿ ಎಂದು ಬಿಂಬಿಸುತ್ತಾರೆ. ಆದರೆ ಅದು ಕೇವಲ 10% ಶ್ರೀಮಂತ ವರ್ಗ ಮಾತ್ರ ಪಡೆಯಬಹುದಾದ ಅಭಿವೃದ್ಧಿ ಕೆಲಸವಾಗಿರುತ್ತದೆ ಎಂದು ಬಡವರಿಗೆ ಯೋಚನೆ ಮಾಡುವಷ್ಟು ಬುದ್ಫಿ ಶಕ್ತಿಯ ಕೊರತೆ ಕಾರಣವಾಗಿದೆ. ಖಾಸಗಿ ಸಂಸ್ಥೆ ಮುಖಾಂತರ ದುಡ್ಡು ಇದ್ದವರಿಗೆ ಮಾತ್ರ ಉತ್ತಮ ಗುಣಮಟ್ಟದ ಜೀವನ ವ್ಯವಸ್ಥೆ ದೊರೆಯುವಂತೆ ಮಾಡುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿಜವಾದ ಅಭಿವೃದ್ಧಿ ಎಂದು ನಂಬುವಂತೆ ಆಗಿದೆ. ಬಡತನ ಉಳಿಸಲು ಮಾಡುವ ವಿವಿಧ ಕಾರ್ಯಕ್ರಮಗಳ ಪಟ್ಟಿ ನೋಡೋಣ
1.ಬಡವರಾಗಿ ಉಳಿಸಲು ಅಧಿಕಾರ, ಸಂಪತ್ತು, ಗೌರವ ವನ್ನು ಹಂಚದಂತೆ ಮಾಡುವುದು. ಅದಕ್ಕೆ ಪೂರಕ ವಾದ ರಾಜಕೀಯ, ಧಾರ್ಮಿಕ, ಸಾಮಾಜಿಕ ಚಟುವಟಿಕೆ ಮುಂದುವರಿಯುವಂತೆ ಮಾಡುವುದು.
2.ಪ್ರತಿಯೊಬ್ಬನಿಗೂ ಉದ್ಯೋಗ ಕೊಡದೇ ಸ್ವಂತ ಶ್ರಮದಿಂದ ಲೂಟಿ ಮಾಡಿ, ಮೋಸ ಮಾಡಿ, ಪುಕ್ಸಟ್ಟೆ ಯಾಗಿ ಲಾಭ ಮಾಡುವ ಉದ್ಯೋಗ ಹೆಚ್ಚು ಸೃಷ್ಟಿ ಮಾಡುವುದು ಉದಾಹರಣೆ ಯೆಜೆಂಟ ಅಂತ ಕೆಲಸ.
3.ಪರಸ್ಪರ ದ್ವೇಷ, ಪೈಪೋಟಿ, ಅಸಮಾನತೆ ಸೃಷ್ಟಿ ಮಾಡಿ, ಕೇವಲ ದುಡ್ಡಿನ ಮತ್ತು ಜಾತಿ ಸಾಮರ್ಥ್ಯಕ್ಕೆ ಬೆಲೆ ಕೊಟ್ಟು, ಮಾನವೀಯತೆಯನ್ನು ದೌರ್ಬಲ್ಯದಂತೆ ಬಿಂಬಿಸುವುದು.
4.ಹೆಚ್ಚು ಸಮಯ, ಹೆಚ್ಚು ಕಷ್ಟ ಪಟ್ಟರು ಕಡಿಮೆ ಆದಾಯ ದೊರೆಯುವಂತೆ ಮಾಡುವುದು ಯೆಜೆಂಟ ಗಳು ದುಡಿಯದೆ ದುಡ್ಡು ಮಾಡುವರು ಸರಕಾರಿ ಇಲಾಖೆ ಯಲ್ಲಿ ಯೆಜೆಂಟ ಗಳು ಹೆಚ್ಹು ಆಗಿ ಇರುತ್ತಾರೆ.
5.ಕೆಲಸ ಮಾಡಿಸುವ ವರ್ಗ ಮತ್ತು ಕೆಲಸ ಮಾಡುವ ವರ್ಗದ ಮಧ್ಯೆ ತುಂಬಾ ಅಂತರ ಸೃಷ್ಟಿ ಮಾಡುವುದು.
6.ಕೆಟ್ಟ ಅಭ್ಯಾಸಗಳನ್ನು ಸಂಪ್ರದಾಯ, ಸಂಸ್ಕೃತಿ ಎಂದು ಬಿಂಬಿಸಿ ಪ್ರೋತ್ಸಾಹ ಕೊಡುವುದು
7.ಸ್ವಂತ ಬುದ್ಧಿ ಉಪಯೋಗಿಸದೆ ವಿಡಿಯೋ, ಕಟ್ಟು ಕಥೆ, ಭಾಷಣಗಳ ಪ್ರಭಾವಕ್ಕೆ ಒಳಗಾಗಿ ನಮ್ಮ ಜನರು ಅಭಿಮಾನಿ ಅಥವಾ ಗುಲಾಮ ಪದ್ಧತಿ ಮುಂದುವರಿಯುವಂತೆ ಮಾಡುವುದು.
ಈ ಎಲ್ಲಾ ಮೋಸ ಹೋಗಬೇಕಾದರೆ ನಿಜವಾದ ಪ್ರಜಾಪ್ರಭುತ್ವ ಒಂದೆ ದಾರಿ.ಅದರ ಮುಖಾಂತರ ಅಧಿಕಾರವನ್ನು ಪ್ರತಿಯೊಬ್ಬ ಪ್ರಜೆಯ ಕೈಯಲ್ಲಿ ಇರುವಂತೆ ಮಾಡುವುದು ಮುಖ್ಯವಾಗಿದೆ.
Share on WhatsApp